Udupi to Badari - Kannada and English

ಉಡುಪಿಯಿಂದ ಬದರಿ ಕಡೆಗೆ
(ಲೇಖಕರು ಶ್ರೀ ಕೇಶವ ರಾವು ತಾಡಿಪತ್ರಿ)

ನೆದೃಶಂ ಸ್ಥಲಮಲಂ ಶಮಲಘ್ನಮ್
ನಾಸ್ಯ ತೀರ್ಥಸಲಿಲಸ್ಯ ಸಮಂ ವಾಃ |
ನಾಸ್ತಿ ವಿಷ್ಣುಸದೃಶಂ ನನು ದೈವಮ್
ನಾಸ್ಮದುಕ್ತಿ ಸದೃಶಂ ಹಿತರೂಪಮ್ || 47 ||

ಬದರಿಯಂತಹ ಪಾಪನಾಶಕ ಸ್ಥಲವಿಲ್ಲ. ಗಂಗೆತೀರ್ಥಸಮ ಜಲವಿಲ್ಲ. ವಿಷ್ಣುವಿನಂತಹ ದೇವರಿಲ್ಲ. ನಮ್ಮ ಮಾತಿನಂತೆ (ಮಧ್ವಾಚಾರ್ಯರ ಉಪದೇಶದಂತಹ) ಹಿತಶಾಸ್ತ್ರವಿಲ್ಲ.

ಉಡುಪಿಯಿಂದ ಬದರಿ ಕಡೆಗೆ ತರಳಿತು ಒಂದು ಭಕ್ತರ ವೃಂದ ಪೂಜ್ಯಶ್ರೀ ಪುತ್ತಿಗೆ ಮಠಾಧೀಶರ ದಿವ್ಯನೇತ್ಱುತ್ವದಲ್ಲಿ. ಅದು ಒಂದು ಮರಿಯಲಾಗದ ಯಾವಜ್ಜೀವ ಸ್ಮೃತಿಪಥದಲ್ಲಿ ನಿತ್ಯನೂತನತ್ವದಿಂದ ಶೋಭಿಸುವ ಮಧುರಾನುಭವದ ಸುಂದರಾಕೃತಿ ಯನ್ನು ಪಡೆಯಿತು. ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೆತ್ರಕ್ಕೆ ಹೋಗಲು ಪ್ರೇರಣೆಯನೀಡಿದ ಶ್ರೀಮನ್ಮಧ್ವರ ಪ್ರೇಷ್ಟತಮನಾದ ಚೆಲುವ ಶ್ರೀ ಕೃಷ್ಣ.
ಎಲ್ಲರೂ ಒಟ್ಟಾಗಿ ಸೇರಿದರು ಸೆಪ್ಟೆಂಬರ್ 11, 2014 ಗುರುವಾರದ ಶುಭದಿನದಲ್ಲಿ ಢಿಲ್ಲಿ ಆರ್. ಕೆ. ಪುರಂ ರಾಯರಮಠದಲ್ಲಿ ಶ್ರೀ ಗುರುಸಾರ್ವಭೌಮರ ದಿವ್ಯಸನ್ನಿಧಾನದಲ್ಲಿ. ಅಲ್ಲಿನ ಕಾರ್ಯನಿರ್ವಾಹಕರು ಅತ್ಯಂತ ಪ್ರೀತಿಭಾವದಿಂದ ಎಲ್ಲರನ್ನೂ ಆಹ್ವಾನಿಸಿದರು, ಅತ್ಯಂತ ಭಕ್ತಿಭಾವದಿಂದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರನ್ನು ಸತ್ಕರಿಸಿದರು.
ಅಂದು ಪೂರ್ವಾಹ್ನದಲ್ಲಿ ಶ್ರೀಪಾದಂಗಳವರು ವಿಟ್ಠಲ ದೇವರ ಸಂಸ್ಥಾನ ಪೂಜೆಯನ್ನು ಸಂಭ್ರಮದಿಂದ ನಡೆಸಿದರು, ನೋಡುವವರಿಗೆ ನಯನಾನಂದಕರ, ಆ ದಿವ್ಯಮಂತ್ರಗಳು ಭಕ್ತರೆಲ್ಲರಿಗೂ ಶ್ರವಣಾನಂದಕರ. ಅದು ನೋಡಿದವರಿಗೆ ಉಡುಪಿಯ ಕೃಷ್ಣ ಒಂದು ರೂಪದಿಂದ ನಮ್ಮಜತೆಯಲ್ಲೇ ಇದ್ದಾನೆ ಎನ್ನುವ ಭಾವನೆ ಬರದೇ ಬಿಡುವದಿಲ್ಲ. ಪೂಜೆಯ ನಂತರ ತೀರ್ಥಪ್ರಸಾದರೂಪದಲ್ಲಿ ಷಡ್ರಸೋಪೆತ ಭೋಜನದಿಂದ ರಸನಾನಂದವೂ ಆಯಿತು.
ಸಾಯಂಕಾಲದಲ್ಲಿ ಗುರುಸಾರ್ವಭೌಮರಿಗೆ ಗುರುವಾರದ ಸೆವಾರೂಪದಲ್ಲಿ ದಿವ್ಯರಥೋತ್ಸವವು ಸಂಭ್ರಮದಿಂದ ನಡೆಯಿತು. ನಂತರ ಪುತ್ತಿಗೆ ಶ್ರೀಪಾದಂಗಳವರಿಂದ ಸಾಯಂಕಾಲದ ಪೂಜೆಯು ಚಂದದಿಂದ ನಡೆಯಿತು. ಆದಮೇಲೆ ಯೆಲ್ಲರೂ ತೀರ್ಥಪ್ರಸಾದಗಳನ್ನು ಯಥೋಚಿತವಾಗಿ ಸ್ವೀಕರಿಸಿದರು.
ಮರುದಿನ ಸೆಪ್ಟೆಂಬರ್ 12 , 7 ಘಂಟೆಗೆ ಹೊರಟಿತು ಭಕ್ತರ ದಂಡು ಹರಿದ್ವಾರಕ್ಕೆ. ಸುಮಾರು ಒಂದೆರಡು ಘಂಟೆಗೆ ಹರಿದ್ವಾರ ಸೇರಿತು. ಎಲ್ಲರ ದೃಷ್ಟಿಯು ಗಂಗೆಯ ಕಡೆ ಇತ್ತು, ಘಂಟೆಯ ಕಡೆ ಇರಲಿಲ್ಲ. ಫಲಿಮಾರು ಮಠಾಧೀಶರಿಂದ ನಿರ್ಮಿತವಾದ ವಸತಿ – ಬಡೇ ಹನುಮಾನ್ ದಿವ್ಯಸನ್ನಿಧಾನ – ಮತ್ತಿಷ್ಟು ಮನಸ್ಸಿಗೆ ಸಂತೃಪ್ತಿಯನ್ನು ನೀಡಿತು. ಎಲ್ಲರೂ ಗಂಗೆಯಲ್ಲಿ ಮಿಂದರು. ಗಂಗೆ ಮಿಂದರೆ ಭವವು ಹೀಂಗಿತಲ್ಲವೇ. ಉಡುಪಿ ಅನಂತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ವೇದವ್ಯಾಸ ಐತಾಳ ಅವರು ಎಲ್ಲರಿಂದಲೂ ಸಂಕಲ್ಪಾದಿಗಳನ್ನು ಮಾಡಿಸಿದರು. ಅಷ್ಟೇ ಅಲ್ಲದೆ ಅವರು ತಮ್ಮ ವಾಕ್ಚಮತ್ಕಾರದಿಂದ ಯಾತ್ರೆಯ ಆದ್ಯಂತವು ಯೆಲ್ಲರಲ್ಲಿಯೂ ನಿತ್ಯಚೈತನ್ಯವನ್ನು ತುಂಬುತ್ತಿದ್ದರು.
ಗಂಗಾ ಗಂಗೇತಿ ಯೋ ಬ್ರೂಯಾತ್ ಯೋಜನಾನಾಂ ಶತೈರಪಿ
ಮುಚ್ಯತೇ ಸರ್ವಪಾಪೆಭ್ಯೊ ವಿಷ್ಣು ಲೋಕಂ ಸ ಗಚ್ಛತಿ |

ಇದರಿಂದ ನಮಗೆ ಒಂದು ಸ್ಪಷ್ಟವಾಗುತ್ತದೆ. ಜಡವಾದ ಜಲವಲ್ಲ ಮೋಕ್ಷವನ್ನೀಡುವುದು. ಆ ನೀರಿನಲ್ಲಿ ಮುಳುಗಿದಾಗ ಆ ತತ್ತ್ವಾಭಿಮಾನಿ ದೇವತೆಯಾದ ಗಂಗೆಯ ಸ್ಮರಣೆ, ಆ ಗಂಗೆಯ ನಿಯಾಮಕರಾದ ರುದ್ರದೇವರ ಸ್ಮರಣೆ, ಆ ರುದ್ರರ ನಿಯಾಮಕಳಾದ ಭಾರತಿಯ ಸ್ಮರಣೆ, ಆ ಭಾರತಿಯ ನಿಯಾಮಕರಾದ ಮುಖ್ಯಪ್ರಾಣನ ಸ್ಮರಣೆ, ಆ ಮುಖ್ಯಪ್ರಾಣನಿಗೆ ನಿಯಾಮಕರಾದ ಲಕ್ಷ್ಮೀನಾರಾಯಣರ ಸ್ಮರಣೆ, ಆ ಗಂಗಾಂತರ್ಗತ ಮಾಧವರೂಪಿ ನಾರಾಯಣನ ಸರ್ವತಂತ್ರಸ್ವತಂತ್ರವಾದ ಸರ್ವನಿಯಾಮಕತ್ವದ ಸ್ಮರಣೆ – ಇತ್ಯಾದಿ ತಾರತಮ್ಯೋಪೇತವಾದ ಜ್ಞಾನವೇ ಮೋಕ್ಷದಾಯಕ.

ಶ್ರೀಪಾದಂಗಳವರು ವಿಟ್ಠಲ ದೇವರ ಸಂಸ್ಥಾನ ಪೂಜೆಯನ್ನು ವಿಧಿವತ್ತಾಗಿ ಮಾಡಿದರು. ನಂತರ ತೀರ್ಥಪ್ರಸಾದ ಸ್ವೀಕಾರವಾಯಿತು. ಇಲ್ಲೊಂದು ಮಾತು ಅವಶ್ಯ ವಕ್ಟವ್ಯ. ಅಡಿಗೆ ಮಾಡುವವರು ನಗುನಗುತಾ ಬೇಸರದೆ ಮೃಷ್ಟಾನ್ನಗಳನ್ನು ಅತ್ಯಂತ ಸಾಮರ್ಥ್ಯದಿಂದ ಮಾಡಿ, ಗುರುಗಳ ಮೂಲಕ ಭಗವಂತನಿಗೆ ಅರ್ಪಿಸಿ, ಭಕ್ತವೃಂದಕ್ಕೆ ಲಭ್ಯವಾಗುವಂತೆ ಮಾಡಿ ತುಷ್ಟಿ ಪುಷ್ಟಿಗಳನ್ನು ಯಾತ್ರೆಯ ಆದ್ಯಂತ ಸಿಗುವಂತೆ ಮಾಡಿದರು.
ನಂತರ ರೋಪ್ ವೆ / ಕೇಬಲ್ ಕಾರ್ ನಲ್ಲಿ ಚಾಮುಂಡಿ ಬೆಟ್ಟ ಅಂಜನಾ ದೇವಿ ಬೆಟ್ಟಗಳಿಗೆ ತೆರಳಿದೆವು. ಅಲ್ಲಿ ಹನುಮಾದಿಗಳ ದೇವಸ್ಥಾನಗಳೂ ಇದ್ದವು. ಅವೆಲ್ಲವೂ ನೋಡಿದ ಮೇಲೆ, ಎಲ್ಲರೂ ಲೋಕಪ್ರಖ್ಯಾತವಾದ ಗಂಗಾ ಆರತಿ ನೋಡಲು ಹೊರಟೆವು. ವರ್ಣನಾತೀತವಾದ ಆ ದೃಶ್ಯವನ್ನು ಏನೆಂದು ವರ್ಣಿಸುವುದು? ಆ ಮೇಲೆ ಚಿಕ್ಕ ಚಿಕ್ಕ ದೀಪಗಳನ್ನು ಹಚ್ಚಿ ನದಿಯಲ್ಲಿ ಬಿಡುವುದು ಆಯಿತು. ತುಂಬು ಮನದಿಂದ ಹಿಂತಿರುಗಿ ಬಂದೆವು.
ಸಾಯಂಕಾಲದ ಪೂಜೆ , ತೀರ್ಥಪ್ರಸಾದ ಸ್ವೀಕಾರ ಯಥೊಚಿತವಾಗಿ ನಡೆಯಿತು.
ಮರುದಿನ ಸೆಪ್ಟೆಂಬರ್ 13, ಬೆಳಿಗ್ಗೆ ಸಂಸ್ಥಾನ ಪೂಜೆ, ದಂಡ ತೀರ್ಥ ಸ್ನಾನ, ತೀರ್ಥಪ್ರಸಾದ ಸ್ವೀಕಾರ ಮಾಡಿ, ಬದರಿ ಕಡೆಗೆ ಹೊರಟೆವು. ಪೆಜಾವರ ಕಿರಿಯ ಸ್ವಾಮಿಗಳಾದ ಶ್ರೀ ವಿಶ್ವಪ್ರಸನ್ಣ ತೀರ್ಥ ಶ್ರೀಪಾದಂಗಳವರು ಹಿಂದಿನ ಅನೇಕ ವರ್ಷಗಳಲ್ಲಿ ಮಾಡಿದಂತೆ ಈ ವರ್ಷವೂ ಬದರಿಗೆ ಪಾದಯಾತ್ರೆಯನ್ನು ಮಾಡುವುದು ಮಧ್ವ ಸಮಾಜದಲ್ಲಿ ಭಕ್ತ್ಯುದ್ರೆಕಾಶ್ಚರ್ಯಾದಿ ಭಾವೊತ್ತೆಜನ ಸ್ಫೂರ್ತಿದಾಯಕವಾಗಿ ಐತಿಹಾಸಿಕ ರೀತಿಯಲ್ಲಿ ಕಂಗೊಳಿಸುತ್ತಿದೆ. ಅವರನ್ನು ಹಾರ್ದಿಕವಾಗಿ ಅಭಿನಂದಿಸಿ, ಅವರ ಜತೆಯಲ್ಲಿ ಸಾಂಕೇತಿಕವಾಗಿ ಕೆಲವು ಕಿಲೋಮೀಟರು ದೂರ ಪಾದಯಾತ್ರೆ ಮಾಡಿ, ಅವರ ವಿಶೇಷ ಸಾಧನೆಯನ್ನು ಮತ್ತಿಷ್ಟು ಜನಕ್ಕೆ ಪ್ರಕಟ ಮಾಡಬೇಕೆಂದು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ತೀರ್ಮಾನ ಮಾಡಿದರು. ರುದ್ರಪ್ರಯಾಗದಲ್ಲಿ ಗುರುದ್ವಾರದಲ್ಲಿ ಗುರುದ್ವಯದ ಸಮಾಗಮವು, ಎರಡು ಜ್ನಾನನದಿಗಳ ಸಂಗಮವಾಗಿ ಗುರುಪ್ರಯಾಗವೆಂದು ಕಥನಯೋಗ್ಯವೆನ್ನುವುದು ಸಮಂಜಸವಲ್ಲವೇ? ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ವಿಶೇಷ ಆತಿಥ್ಯವನ್ನು ಸ್ವೀಕಾರ ಮಾಡಿ, ಸಾಂಕೇತಿಕವಾಗಿ ಸ್ವಲ್ಪದೂರ ಪಾದಯಾತ್ರೆ ಮಾಡಿ ಶ್ರೀ ಸುಗುಣೇಂದ್ರ ಶ್ರೀಪಾದಂಗಳವರು ಶ್ರೀ ವಿಶ್ವಪ್ರಸನ್ಣ ತೀರ್ಥ ಶ್ರೀಪಾದಂಗಳವರನ್ನು ಮನಃ ಪೂರ್ವಕವಾಗಿ ಅಭಿನಂದಿಸುತ್ತಾ ಒಂದು ಸಂದೇಶವನ್ನು ನೀಡಿ ಮುಂದು ವರಿಸಿದರು.
ತದನಂತರ ನಾವು ಪೀಪಲ್ ಕೋಟಿ ನಲ್ಲಿ ರಾತ್ರಿ ವಿರಾಮ ಮಾಡಿದೆವು.
ಮರುದಿನ ಸೆಪ್ಟೆಂಬರ್ 14, ಬೆಳಿಗ್ಗೆ ಹೊರಟು ಸುಮಾರು ಒಂದು ಘಂಟೆಗೆ ಬದರಿ ಸೇರಿದೆವು. ಎಲ್ಲರೂ ತಪ್ತಕುಂಡದಲ್ಲಿ ಸ್ನಾನ, ಅಲಕನಂದದಲ್ಲಿ ಸ್ನಾನ ಮಾಡಿ ಒಂದು ತೃಪ್ಟಿಭಾವವನ್ನು ಹೊಂದಿದೆವು.


ಅಲ್ಲಿ ಅಧಿಕಾರಿಗಳಾದವರು ಶಾಸ್ತ್ರೊಕ್ತವಾಗಿ ಪಕ್ಷಶ್ರಾದ್ಧವನ್ನು ಮಾಡಿ, ಪಿಂಡಗಳನ್ನು ಬ್ರಹ್ಮಕಪಾಲಕ್ಕೆ ಹಾಕಿ, ಕೃತಮನಸ್ಕರಾದರು.
ಸ್ವಾಮಿಗಳು ಮಾಡಿದ ಸಂಸ್ಥಾನ ಪೂಜೆ ನೋಡಿ, ತೀರ್ಥ ಪ್ರಸಾದ ಸ್ವೀಕಾರ ಮಾಡಿ, ಬದರಿ ನಾರಾಯಣನ ದರ್ಶನಕ್ಕೆ ಹೊರಟೆವು. ಮತ್ತು ಮತ್ತು ಆ ಬದರಿ ನಾರಾಯಣನ ದರ್ಶನ ಮಾಡಿ, ಶ್ರೀ ವಿಷ್ಣು ಸಹಸ್ರನಾಮಾದಿ ಸೇವೆಗಳಿಂದ ಆ ಸ್ವಾಮಿಯ ಸ್ಮರಣೆಯನ್ನು ಮಾಡಿ ತನ್ಮಯ ಚಿತ್ತರಾಗಿ, ಜನ್ಮ ಧನ್ಯವಾಯಿತೆಂದು ಭಾವಿಸಿ ಅಲೌಕಿಕ ಆನಂದದಲ್ಲಿ ಮುಳುಗಿದೆವು. ಅಲ್ಲಿಯ ವಿಶೇಷ ವಿಷ್ಣು ಸಹಸ್ರ ನಾಮದ ಪುರಶ್ಚರಣ ದಿನದ ಉದ್ದಕ್ಕೂ ಆಗುತಲೆ ಇರುತ್ತದೆ.
ಮರುದಿನ ಸೆಪ್ಟೆಂಬರ್ 15, ಕೃಷ್ಣ ಜಯಂತಿ – ಉಪವಾಸದ ದಿನ. ಎಲ್ಲರೂ ಸ್ವೋಚಿತ ಅಹ್ನಿಕ ಕಾರ್ಯಗಳನ್ನು ಮುಗಿಸಿ, ಸ್ವಾಮಿಗಳ ಜತೆಯಲ್ಲಿ, ಬದರಿ ನಾರಾಯಣನ ವಿಶ್ವರೂಪದರ್ಶನ, ಅಭಿಷೆಕಾದಿಗಳನ್ನು ನೋಡಿ ತನ್ಮಯರಾದೆವು. ಅಲ್ಲಿನ ಪ್ರಧಾನ ಅರ್ಚಕರು (ರಾವಲ್) ಸ್ವಾಮಿಗಳನ್ನು ತಮ್ಮ ಕ್ವಾರ್ಟರ್ಸ್ ನಲ್ಲಿ ಸತ್ಕರಿಸಿದರು.
ಅಲ್ಲಿಂದ ಕೆಲವು ಮಂದಿ ಮಾನಾಗೆ ಹೋದೆವು. ಗಣೇಶಗುಹೆ, ವ್ಯಾಸ ಗುಹೆ, ಸರಸ್ವತಿ ನದಿಯ ದರ್ಶನ (ಕೇಶವ ಪ್ರಯಾಗ), ಭೀಮ ಪುಲ್ ನೋಡಿದೆವು. ಅಲ್ಲಿಂದ ಕೆಲವರು ಹಿಂತಿರುಗಿ ಅನಂತ ಮಠಕ್ಕೆ ಹೋದರು. ಆರು ಮಂದಿ ವಸುಧಾರೆಗೆ ಹೋಗಬೇಕೆಂದು ನಿರ್ಧರಿಸಿ ಹೊರಟೆವು.
ಯತ್ರಕ್ಷೇತ್ರೇ ವಿಧೆಃ ಸತ್ರೆ ಹಯಗ್ರೀವೋ ಹ್ಯವಾತರತ್ |
ಧಾರದ್ವಾರಾ ತ್ರಯೀ ತತ್ರ ಶ್ರೂಯತೆ.ಅದ್ಯಾಪಿ ಸೂರಿಭಿಃ ||
ಯಾವ ಬದರಿಕಾಶ್ರಮ ಕ್ಷೇತ್ರದಲ್ಲಿ ಬ್ರಹ್ಮದೇವರ ಯಾಗದಲ್ಲಿ ಹಯಗ್ರೀವ ರೂಪಿ ಪರಮಾತ್ಮ ಅವತಾರ ಮಾಡಿದನೋ, ಅಲ್ಲಿ ನೀರಿನ ಧಾರೆಗಳ ಮೂಲಕವಾಗಿ ವೇದಗಳು ಸ್ನಾನ ಮಾಡುವ ಜ್ಞಾನಿಗಳಿಂದ ಈಗಲೂ ಕೇಳಲ್ಪಡುತ್ತವೆ.
ದೈವಾನುಗ್ರಹದಿಂದ ಆ ವಸುಧಾರೆಯ ದರ್ಶನವಾಗಿ ಸಾಯಂಕಾಲಕ್ಕೆ ತಿರುಗಿ ಬರಲು ಸಾಧ್ಯವಾಯಿತು.
ರಾತ್ರಿ ಮಹಾಪೂಜೆಯನ್ನು ಮಾಡಿ, ಅರ್ಘ್ಯಪ್ರದಾನ ಮಾಡಿ, ಮರುದಿನ ಸೆಪ್ಟೆಂಬರ್ 16 ಬೆಳಿಗ್ಗೆ ಪಾರಣೆ ಮಾಡಿ, ಹೃಷೀಕೇಶಕ್ಕೆ ಹೊರಟೆವು. ಅಲ್ಲಿ ಸಾಯಂಕಾಲದ ಪೂಜೆ , ಫಲಾಹಾರ ನಂತರ ವಿಶ್ರಾಮ.
ಮರುದಿನ ಸೆಪ್ಟೆಂಬರ್ 17 ಗಂಗಾನದಿಯಲ್ಲಿ ದಂಡ ತೀರ್ಥ ಸ್ನಾನ, ಸಂಸ್ಥಾನ ಪೂಜೆ, ತೀರ್ಥ ಪ್ರಸಾದ ಸ್ವೀಕಾರ, ಢಿಲ್ಲೀಗೆ ಪ್ರಯಾಣ. ಢಿಲ್ಲಿ ನಲ್ಲಿ ಸಾಯಂಕಾಲ ಪೂಜೆ, ತೀರ್ಥಪ್ರಸಾದ ಸ್ವೀಕಾರ. ಆ ಮೇಲೆ ಸ್ವಾಮಿಗಳವರು ತಮ್ಮ ಅಮೃತವಚನಗಳಿಂದ ಬದರಿಯಾತ್ರೆ ವಿಜಯವಂತವಾಗಿ ನಡೆದದ್ದಕ್ಕೆ ತಮ್ಮ ಹರ್ಷವನ್ನು ಪ್ರಕಟ ಮಾಡಿದರು.

ಪೂರ್ವೆಪಿ ಕರ್ದಮಪರಾಶರಪಾಂಡುಮುಖ್ಯಾ
ಯತ್ಸೇವಯಾ ಗುಣಗಣಾಢ್ಯಮಪತ್ಯಮಾಪುಃ
ತಮ್ ಪೂರ್ಣಸದ್ಗುಣತನುಂ ಕರುಣಾಮೃತಾಬ್ಧಿಂ
ನಾರಾಯಣಮ್ ಕುಲಪತಿಂ ಶರಣಂ ವ್ರಜೇಮ ||

ಯಾರ ಸೇವೆ ಯಿಂದಾದರೆ , ಕರ್ದಮ, ಪರಾಶರ, ಪಾಂಡು,ಮುಂತಾದವರು ಗುಣಗಣಸಂಪನ್ನರಾದ ಸಂತತಿಯನ್ನು ಪಡೆದರೋ, ಅಂಥಾ ಪೂರ್ಣಸದ್ಗುಣತನುವಾದ , ಕರುಣಾಸಾಗರನಾದ ನಾರಾಯಣನ್ನು ಶರಣು ಹೊಂದೋಣ (ಎಂದು ಮಧ್ಯಗೆಹಭಟ್ಟರು ನೆನೆದರು).

ಪಾಂಡುರಾಜ ಅನಂತೇಶ್ವರನ್ನು ಸೇವಿಸಿದ ದಾಖಲೆ ಇಲ್ಲ. ಆದರೆ ಇಲ್ಲಿ ನಾರಾಯಣ ಎಂದು ಶಬ್ದಪ್ರಯೋಗ ಮಾಡಿದ್ದು, ಪಾಂಡುಕೇಶ ಎನ್ನುವ ಸ್ಥಳ ಬದರಿಯಲ್ಲಿ ಇರುವುದು ನೋಡಿ, ಆ ಬದರಿ ನಾರಾಯಣನೆ ಈ ಅನಂತೇಶ್ವರ ನಾಮಕ ನಾರಾಯಣನು ಎನ್ನುವುದು ಮನವರಿಕೆ ಯಾಗುತ್ತದೆ.

ಸ್ವಾಮಿಗಳು ಎಲ್ಲರಿಗೂ ಶಾಲುವೆ ಹೊದ್ದಿಸಿ, ಬದರಿ ಪ್ರಸಾದವನ್ನು, ಫಲ ಮಂತ್ರಾಕ್ಷತೆಯನ್ನು ಕೊಟ್ಟು, ಆಶೀರ್ವಾದ ಮಾಡಿದರು. ಎಲ್ಲರ ಮುಖಕಮಲಗಳಲ್ಲಿ ಮಂದಹಾಸದ ಚಿಗುರು, ಮನಃಫಲಕದಲ್ಲಿ ಸಂತೃಪ್ತಿಯ ಬೆಳಕು, ಮಾತುಗಳಲ್ಲಿ ಸೌಮ್ಯತೆಯ ಮಧುವು, ನೇತ್ರಗಳಲ್ಲಿ ಆನಂದದ ಝಳಕು ನಿಜವಾಗಿಯೇ ಭಗವಂತನ ಕೃಪ ನಮ್ಮ ಮೇಲೆ ಸ್ವಲ್ಪ ಬೀರಿದೆ ಎನ್ನುವುದಕ್ಕೆ ಚಿಹ್ನೆಗಳಾಗಿ ನಿಂತಿವೆ.

From Udupi to Badari

(By : Shri Kesava Rao Tadipatri)

nedRushaM sthalamalaM shamalaghnaM
naasya tiirthasalilasya samaM vaaH |
naasti viShNusadRushaM nanu daivaM
naasmaduktisadRushaM hitaruupam.h || 47 ||

There is no sin-eradicating place like Badari. There is no water like gaMgA tIrtha. There is no God like ViShNu. There is no auspicious and beneficial composition like our words (madhvAchArya's upadesha, which describes flawless Vedas and VedavyAsa's composition ) .

A group of devotees set out on a pilgrimage tour from Udupi to Badari under the divine leadership of PujyashrI Puttige MaThAdhIsharu, Sri Sugunemdratirtha swamiji. It had taken a beautiful shape of pleasant experience, resplendent with unforgettable and ever fresh thoughts imprinted in the deep folds of memory. The most beautiful Lord Shri Krishna, the most dear one to Acharya Madhva, instigated to proceed from one pilgrimage center to another.

All the participating devotees assembled on the auspicious day of Thursday September 11, 2014 at R.K.. PuraM Rayara MaTha in the divine presence of Sri Raghavendra GurusArvabhauma. The manager and the rest of the staff welcomed all with great affection and honoured SrI Sugunemdra tirtha shrIpAdaMgaLavaru with great devotion.

Swamiji performed the grand SamsthAna pUja to Lord Vitthala that morning with zeal and devotion. Witnessing it was a feast to the eyes, listening to the mantras was a feast to the ears. Those who underwent that experience will not fail to feel the austere presence of Lord Sri Krishna from Udupi in one form. After the pUja, the partaking of food in the form of tirtha prasada provided a feast to the tongue as well

A festive celebration of glorious rathotsava was performed to GurusArvabhauma in the evening, which is a Thursday seva event. There after the evening pUja was performed by Puttige Sripadaru. Then all the participating devotees partook the tIrtha prasAda as appropriate.

The participating cluster of devotees set out for Haridwar at around 7 am the next day, i.e. September 12. We reached Haridwar around 2 pm. The devotees’ attention was on Ganga, but not the time of the clock. The facility built by the respected Phalimaru maThAdhIsha along with the divya sannidhAnam of “bade hanuman” (a beautiful sculpture of Hanuman that is pretty big) made the minds more happy. All of us took a dip in Ganga. There is a Dasarapada that extolls Ganga by saying The cycle of birth and death ends with the dip in Ganga”. SrI VedavyAsa Aitala, the chief priest of Udupi AnaMteshvara DevasthAna helped all those who needed assistance in doing Sankalpa, etc. In addition, Sri Aitala used his lively conversational skills to keep one and all in jovial mood.

gaMgA gaMgEti yo brUyAt yOjanAnAM shatairapi
muchyate sarvapApebhyo viShNu lokaM sa gachchhati |

This makes at least one thing clear. The inert water is not the one that liberates us from the sins. When we take a dip in the river Ganga, contemplation of the river’s tattvabhimani devata Ganga, her controlling deity Maharudra deva, his controlling deity Bharati, har controlling deity MukhyapraaNa, his controlling deities Mahalakshmi and Narayana, and the constant smaraNe of the universal controllership of all-independent MadhavarUpi Narayana, who is the indweller of Ganga – this kind of pure knowledge comprising of Taaratamya is the one that liberates us from the sins.

Sri Puttige Swamiji performed in the usual prescribed grand manner. Thereafter we partook tIrtha prasAda. One thing must be mentioned here. The cooking team prepared delicious items with devotion and efficiency and also rolling smiles and without a trace of displeasure. These items are offered to the Lord thru Gurugalu and then those items satisfied the devotees, giving them physical, mental and spiritual energies.



Then we set out by Rope-way/Cable car to Chamundi mountain Anjana devi mountain , where there are other deities like Hanuman as well. After that all of us went to the world famous “Ganga Arati”, which is indescribable. Then we lighted small lamps, did sankalpa thru some Pandas there and left the lamps into Ganga. Then we returned to our rooms filled with feelings of fulfillment. The evening Puja by Gurugalu and partaking of tirthaprasada by the devotees as appropriate were done. Next day morning,i.e. on September 13, Swamiji performed the SamsthAna pUja to Lord Vitthala, then there was danda-tirtha-snana, then there was tirtha prasada. After that we set out to Badari.

Pejavara MaTha junior Swamiji, Sri Vishvaprasanna Tirtharu was performing “pAdayatra(pilgrimage by foot)” to Badari, just like past several years. This kind of Padayatra every year by Sri Vishvaprasanna Tirtharu, is inspirational in a legendary fashion enkindling the peaks of devotion and astonishment in the minds of the Madhvas. Sri Sugunendra Tirtharu made a decision to congratulate Sri Vishvaprasanna Tirtharu whole-heartedly, symbolically participate in the Padayatre by walking a few kilometers with him. Sri Puthige Svamiji further presented a message to the public about the special sAdhane of Sri Pejavar Junior Swamiji and continued with the journey. There after, we travelled and halted in Pipal Koti that night.

The next day morning on September 14, we started for Badari and reached there around 1 pm. All of us had bath in Tapta kuMDa (The water in the receptacle is pretty hot due to Sulphur base beneath that).
Then we took bath in Alakananda and felt very satisfied. The ones who are adhikaris(meaning those who did not have mother or father or both) performed Paksha shraadha and offered PiNdas to Brahmakapaala and felt very blessed.

Swamiji performed the SamsthAna pUja to Lord Vitthala. After witnessing it and partaking Tirtha Prasada, we set out for Badari Narayana Darshana. We had the Badari Narayana darshana again and again, did the smaraNe of the Lord thru Sri Vishnu Sahasra nAma seva, etc., were filled with great joy with the mind absorbed in the thoughts of Sri Hari. The speicialty is that Sri Vishnu Sahasranama is recited several times thru the day.

The next day morning on September 15 was Sri Krishna Jayanti - day of fasting. We completed our daily Ahnika kAryas, went with Swamiji and had Badari Narayana's VishvarUpa darshana, witnessed Abhisheka to the Lord and were thrilled. The main priest or Raval there honored Swamiji in the quarters of main priest.

From there some of us went to the village of Mana. There we visited Ganesha guha and Vyasa guha. Then we had darshana of Saraswathi river in Keshava Prayaga. Then we saw Bhima pul (A huge rock was placed by Bhimasena devaru to form a bridge like structure to enable Draupadi to cross a ridge). Some of the devotees returned to Ananta Matha of Badari. Six of us decided to go to Vasudhara and started our journey by climbing a stony path. All these were successfully completed under the able guidance of Sri Gopalacharya.

yatrakShEtrE vidheH satrE hayagrIvo hyavaatarat |
dhaaraadvaaraa trayI tatra shrUyate.adyApi sUribhiH ||

In this Vasudhara kShetra in BadarikAshrama, Chaturmukha Brahma performed yAga and Hayagriva form of Paramatma incarnated and even now the jnAnis hear the vedic hymns in the dhAras(streams) of the fall while taking bath in those streams.

By God’s grace, we could have darshana of Vasudhara and return by the evening. That night, we saw the Mahapuja by Swamiji, performed arghya pradAna to Lord Krishna. We did pAraNe the next day (September 16) morning and left for Hrishikesh. There we witnessed the evening Puja by Swamiji and had Phalahara and then rested that night. The next day morning on September 17, we had Danda tIrtha snana in the auspicious presence of Swamiji, witnessed the samsthAna pUje by Swamiji, had Tirtha Prasada and started our journey to New Delhi. In Delhi, we saw the evening puje and took Tirtha Prasada. After that Swamiji thru his Amrutavani gave a pravachana after expressing his complete satisfaction for the successful completion of Badari yAtre.

pUrvepi kardamaparaasharapaaMDumukhyaa
yatsEvayA guNagaNADhyamapatyamApuH
tam pUrNa sadguNa tanuM karuNaamRutaabdhiM
nArAyaNam kulapatiM sharaNam vrajema ||

"MadhyagehabhaTTaru (father of Madhvacharya) thought like this - Let us take refuge in Lord Narayana, an ocean of Karuna, personification of infinite auspicious qualities and by serving Whom, Kardama Prajapati, Parashara muni, Pandu Raja, et al, acquired a progeny that was filled with auspicious qualities, as appropriate.

There was no historical account of Panduraja serving Ananteshvara. But the usage of the word Narayana here, the presence of a place called Pandukesha near Badari strongly suggests that Badari Narayana is Himself Ananteshvara nAmaka Narayana. Swamiji presented Shawls to all the devotees, gave Badari Prasada and Phala Mantrakshata, and did Ashirvada.

The faces of the devotees blossomed like a lotus full of smiles, the hearts were filled with a deep sense of satisfaction, the nectar-like words danced on the tongues, the eyes gleamed with joy. It was a doubtlessly uniform feeling that all these things were the insignia for a trace of Lord's grace flowing down to us and that trace is enough to overwhelm us.

Shri KrishNArpaNamastu !!
Link to Thirtha prabandha Audio

Comments